Posts

Showing posts from April 15, 2021

ಕೊರೋನಾ ಪರೀಕ್ಷೆ

 ಕರೋನಾ ಹಿನ್ನೆಲೆಯಲ್ಲಿ ಇದೀಗ ಮತ್ತೆ ಪ್ರಾರಂಭವಾದ ಚರ್ಚೆ ಇದು. ಈ ಶೈಕ್ಷಿಕವರ್ಷದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕೋ ಬೇಡವೋ ? ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವ ಹಾಗೆ.   ಪರೀಕ್ಷೆ ಮಾಡುವುದಾದರೆ, ಯಾವ ರೀತಿಯ ಪರೀಕ್ಷೆ ಉಚಿತ, ಆನ್ಲೈನ್ ಅಥವಾ ಆಫ್ಲೈನ್ ? ಈ ಹಿನ್ನೆಲೆಯಲ್ಲಿ ಕೆಲವು ವಿಚಾರಗಳು. ೧. ಪ್ರಾಯ: ಕರೋನಾ ಹಿನ್ನೆಲೆಯಲ್ಲಿ ಉಳಿದ ಕ್ಷೇತ್ರಗಳ- ಕುರಿತಾಗಿ ಯಾವ ರೀತಿ ಗಂಭೀರ ಚಿಂತನೆ ನಡೆದಿದೆಯೋ ಆ ರೀತಿಯ ಗಂಭೀರ ಚಿಂತನೆ ಶಿಕ್ಷಣ ಕ್ಷೇತ್ರದ ಕುರಿತು ನಡೆದಿಲ್ಲ. ತಮಗೆ ತೋರಿದಂತೆ ಆಯಾ ಶಿಕ್ಷಣಸಂಸ್ಥೆಗಳು ಕೆಲವು ಉಪಾಯಗಳನ್ನು ಕೈಗೊಂಡಿವೆ. ಕೆಲವೆಡೆ ಭಾಗಶ: ಆನ್ಲೈನ್ ಶಿಕ್ಷಣ ನಡೆದರೆ ಮತ್ತೆ ಕೆಲವೆಡೆ ಆಫ್ಲೈನ್ ಶಿಕ್ಷಣ ನಡೆದಿದೆ. ಇಂತಹ ಶಿಕ್ಷಣ ಪ್ರಕ್ರಿಯೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿದ ಅಧ್ಯಾಪಕರು ಎಷ್ಟೋ ವಿದ್ಯಾರ್ಥಿಗಳೆಷ್ಟೋ  ದೇವರೇ ಬಲ್ಲ.   ೨. ವಸ್ತುತ: ಈ ಶೈಕ್ಷಣಿಕ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ ಶಿಕ್ಷಣ ದೃಷ್ಟಿಯಿಂದ ಬಹಳಷ್ಟು ಶೋಚನೀಯವಾಗಿದೆ. ಕಾರಣ ಕಳೆದ ವರ್ಷ ಶೈಕ್ಷಣಿಕ ವರ್ಷದ ಅಂತ್ಯಕ್ಕೆ ಕೋರೋನಾ ಆಕ್ರಮಣವಾಗಿತ್ತು. ಆದ್ದರಿಂದ ಶಿಕ್ಷಣ ದೃಷ್ಟಿಯಿಂದ ಕಳೆದ ವರ್ಷ ಈ ವರ್ಷಕ್ಕಿಂತ ಉತ್ತಮವಾಗಿತ್ತು. ೩. ಆದ್ದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಶಿಕ್ಷಣ ಬಹಳ ದುರ್ಬಲ ಮಾತ್ರವಲ್ಲ, ಎಲ್ಲ ವಿದ್ಯಾರ್ಥಿಗಳೂ ಸಂಪೂರ್ಣವಾಗಿ ಶಿಕ್ಷಣವನ್ನು ಪಡೆಯುವಲ್ಲಿ ಸಫಲರಾಗಿಲ್ಲ. ಇದನ್ನು ಶ