ಬ್ರಾಹ್ಮಣ್ಯ ಮತ್ತು ಭಾರತ
ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ ಮಾತಿದು, "ನಾವು ಬ್ರಾಹ್ಮಣ್ಯ ವನ್ನು ಒಪ್ಪೋದಿಲ್ಲ. ಅದರ ನಾಶವಾಗಬೇಕು" ಲಿಂಗಾಯತ, ವೀರಶೈವ, ಪಂಚಮಸಾಲಿ, ರೆಡ್ಡಿ, ಒಕ್ಕಲಿಗ, ಇನ್ನೂ ಹಿಂದುಳಿದ, ಮತ್ತು, ಪ.ಜಾ. ಪ.ಪಂ ಗಳಲ್ಲಿ ಎಷ್ಟೋ ಅವಾಂತರ ಜಾತಿಗಳಿವೆ, ಸರಕಾರಿ ಲಿಸ್ಟ್ ತಗೆದು ನೋಡ್ರಪಾ ಎಷ್ಟು ಪ್ರಕಾರದ ಜಾತಿಗಳಿದಾವೆ ಅಂತ. ಈಗ ಚಾತುರ್ವರ್ಣ್ಯ ದಲ್ಲಿ ಇವೆಲ್ಲಾ ಜಾತಿಗಳು ಎಲ್ಲಿ ಸೇರ್ತವೋ? ಅವುಗಳನ್ನು ನಿರ್ಮಿಸಿದವರು ಯಾರೋ ? ಲಿಂಗಾಯತ ವೀರಶೈವ ಧರ್ಮದ ಸಂಸ್ಥಾಪಕರು ಯಾರು ಅಂತ ನಿಮಗೆ ಗೊತ್ತೇ ಇದೆ. ಹೋಗ್ಲಿ ಬ್ರಾಹ್ಮಣ್ಯ ನಾಶ ಆದ್ರೆ ಇದೆಲ್ಲಾ ನಾಶ ಆಗ್ತದೋ ? ಬ್ರಾಹ್ಮಣ್ಯ ನಾಶ ಮಾಡೋದು ಅಂದ್ರೇನು ? ಅದೊಂದು ಜೀವನಧರ್ಮ ಅದನ್ನು ನಾಶ ಮಾಡೋದಿಕ್ಕೆ ನೀವ್ಯಾರು? ಯಾರೋ ತಲೆ ಹಿಡುಕ ಸಾಹಿತಿನೋ ಕವಿನೋ ಅವಿವೇಕತನದಿಂದ ಏನೋ ಅಮಲಿನಲ್ಲಿ ಗೀಚಿದಾಂತ ಅದನ್ನೇ ಕಂಠಪಾಠ ಮಾಡಿ ಬ್ರಾಹ್ಮಣರ ನಿಂದನೆ ಮಾಡ್ತಾರೆ. ಬ್ರಾಹ್ಮಣರು ಇರೋದೇ ೨%. ನಿಮಗೆ ಅವರಿಂದ ತೊಂದರೆ ಆಗಿದ್ರೆ ಅವರನ್ನು ಬಹಿಷ್ಕರಿಸಿ. ಉಳಿದವರ ಸಂಖ್ಯೆ ೯೮%. ನೀವು ಒಗ್ಗಟ್ಟಾಗಿ, ಯಾರು ತಡೆದವ್ರು? ಯಾಕೆ ಒಗ್ಗಟ್ಟಾಗಿಲ್ಲ? ಬ್ರಾಹ್ಮಣ ಯಾರ ತಂಟೆಗೆ ಬರೋದಿಲ್ಲ, ಅವರ ನಿಂದನೆ ಮಾಡೋ ಅಧಿಕಾರ ಯಾರಿಗೂ ಇಲ್ಲ. ನಮ್ಮ ಸಾಮರ್ಥ್ಯ ದಿಂದ ನಾವು ದುಡಿದು ತಿನ್ಕೋತೀವಿ, ನಮ್ಮ ದೇವರು, ನಮ್ಮ ದೇವಸ್ಥಾನಗಳಿಗೆ ಆರತಿ ತಟ್ಟೆಗೆ, ನೀವು ದುಡ್ಡು ಹಾಕಬೇಡಿ, ಹಾಕ...