सन्तति: शुद्धवंश्या हि परत्रेह च शर्मणे

 सन्तति: शुद्धवंश्या हि परत्रेह च शर्मणे ।

ನಮ್ಮ ದೇಶದ ಪ್ರಸಿದ್ಧ ಹಿಂದೂ ಸಂಘಟನೆಗಳ ಎಡಬಿಡಂಗಿತನ ಅವರಿಗೂ ಇರುವ ದುರುದ್ದೇಶ ಒಂದೇ ಬ್ರಾಹ್ಮಣ್ಯ ನಾಶ.ನಾವೆಲ್ಲ ವೇದ ಕಲೀತಿವಿ, ನಾವು ಎಲ್ಲ ಒಂದೇ. ಸರಿ ನಿಮಗೆ ವೇದ ಕಲಿಯೋದಿಕ್ಕೆ ನಮ್ಮ ಅಡ್ಡಿ ಇಲ್ಲ. ನಿಮಗೆ ಬೇಡ ಅನ್ನಲು ನಾವ್ಯಾರು? ಮ್ಯಾಕ್ಸ್‌‌ ಮುಲ್ಲರ್ ಓದಲಿಲ್ಲವೇ? ಓದಿದ, ಅವನನ್ನು ಮೋಕ್ಷ ಮುಲ್ಲರ್ ಅಂದ್ರು. ಅವನು ತನ್ನಿಂದ ಆದಷ್ಟು ವೈದಿಕ ಸಂಪ್ರದಾಯಕ್ಕೆ ಅಪಚಾರ ಮಾಡಿದ, ಬ್ರಾಹ್ಮಣರೆಲ್ಲ ವೇದ ಓದಿರುವರೇ ? ಇಲ್ಲ ಅವೈದಿಕ ಬ್ರಾಹ್ಮಣರೇ ಹೆಚ್ಚು. ಆದರೂ ಅಲ್ಪ ಸ್ವಲ್ಪ ವೈದಿಕ ಬ್ರಾಹ್ಮಣರು ನಿಮ್ಮ ಏಕತೆಗೆ ಪ್ರತಿಬಂಧಕರಾಗಿದ್ದಾರೆ ಅಂದ್ರೆ, ಒಪ್ಪಲಾಗದ ಮಾತು. ಹಿಂದೂಗಳಲ್ಲಿ ವೈದಿಕ ಬ್ರಾಹ್ಮಣರ ಸಂಖ್ಯೆ ಅತ್ಯಲ್ಪ. ವೇದ ಓದಿದರೂ ಅವರ ಮಟ್ಟಕ್ಕೆ ಏರಲಾಗದೇ, ಅವರ ಶುದ್ಧತೆಯಿಂದ ಉಂಟಾದ ಬ್ರಹ್ಮ ತೇಜಸ್ಸು ಕಂಡು ಹೊಟ್ಟೆ ಉರಿಯೇ? ನಿಮ್ಮ ಅಸಹನೆಗೆ ಕಾರಣ ಏನು?. 

ಬ್ರಾಹ್ಮಣ ಜಾತಿ ನಾಶಮಾಡಿದ್ರೂ, ನಿಮ್ಮಲ್ಲಿ ಈಗ ಇರುವ ಇತರ ಜಾತಿ ವ್ಯಾಮೋಹದಿಂದ, ಭಾಷಾವ್ಯಾಮೋಹದಿಂದ, ಪ್ರಾದೇಶಿಕ ವ್ಯಾಮೋಹದಿಂದ ಬಂಧುತ್ವದ ವ್ಯಾಮೋಹದಿಂದ ಮುಕ್ತರಾಗಲು ಸಾಧ್ಯವೇ? ವ್ಯಾಮೋಹ, ಭೇದ ಮನುಷ್ಯ ಸಹಜ ಧರ್ಮ. ಎಲ್ಲಾ ವ್ಯಾಮೋಹಗಳೂ ಸಹ್ಯ ನಿಮಗೆ. ಯಾಕೆ? ಅದು ನಿಮ್ಮ ಸ್ವಾರ್ಥ. ಆದ್ರೆ ನಿಮ್ಮ ದುರುದ್ದೇಶ ಏನು ? ಬ್ರಾಹ್ಮಣ ಸಂತತಿ ಇರಕೂಡದು. ಅದನ್ನು ಭ್ರಷ್ಟಗೊಳಿಸಬೇಕು. ಅದರಿಂದ ಆಗುವ ಲಾಭವೇನೋ ತಿಳಿಯಲಿಲ್ಲ. 

 ಎಲ್ಲರೂ ಹಿಂದೂಗಳಾಗೋಣ. ಆಗಲಿ, ಈಗ ಆಗಿಲ್ಲವೇ ? ಬ್ರಾಹ್ಮಣ್ಯ ನಿಮಗೆ ಈ ವಿಷಯದಲ್ಲಿ ಅಡ್ಡಿ ಮಾಡಿದೆ ಅಂತ ಅನಿಸೋದಾದ್ರೆ, ಅದನ್ನು ಅಥವಾ ವೈದಿಕ ಬ್ರಾಹ್ಮಣರನ್ನು ಬಿಟ್ಟು ಒಂದಾಗಿ, ಯಾಕೆ ಸಾಧ್ಯವಾಗಿಲ್ಲ? ನಿಮಗೆ ಯಾವುದೇ ಜೀವನ ಪದ್ಧತಿಯಲ್ಲಿ ವ್ಯತ್ಯಾಸ ಇಲ್ಲದಿದ್ದರೂ ನಿಮ್ಮ ನಿಮ್ಮ ಜಾತಿ ನಿಮಗೆ ಮುಖ್ಯ. ವಸ್ತುಶಃ ನಿಮ್ಮ ನಿಮ್ಮ ಜಾತಿಗಳಲ್ಲಿ ಬೆರಳೆಣಿಕೆಯ ವ್ಯತ್ಯಾಸಗಳು ಜೀವನ ಪದ್ಧತಿಯಲ್ಲಿ ಇರಬಹುದು, ಆದರೂ ಅವುಗಳನ್ನು ಬಿಡಲೊಲ್ಲದ ನೀವು, ಅಪಾರವಾದ ವ್ಯತ್ಯಾಸಾಗಳಿರುವ ಬ್ರಾಹ್ಮಣ ಜಾತಿಯ ವೈದಿಕ ರನ್ನು  ಜಾತಿಬಿಡಿ ಎನ್ನುವುದು ಸರಿಯೇ?    

ನಿಮಗೆ ವೇದಗಳನ್ನು ಕಲಿಯುವ ಉದ್ದೇಶ ಬ್ರಾಹ್ಮಣ್ಯದ ನಾಶ ಮಾಡೋದು.  ಜ್ಞಾನ ಕ್ಕಾಗಿ ಅಲ್ಲ. ಕಾರಣ, ವೇದಗಳಲ್ಲಿ ಗೀತೆಯಲ್ಲಿ ಶ್ರದ್ಧೆ ಇರೋದಾದ್ರೆ ಬ್ರಾಹ್ಮಣ್ಯ ವನ್ನು ನಾಶಮಾಡೋದಲ್ಲ, ಪರಿಶುದ್ಧವಾದ ಬ್ರಾಹ್ಮಣ ಜಾತಿಯು ಸಂರಕ್ಷಣೆ ಮಾಡಬೇಕು. सन्तति: शुद्धवंश्या हि परत्रेह च शर्मणे ಎಂದ ಹಾಗೆ ಶುದ್ಧ ಸಂತತಿ ಬಹಳ ಮುಖ್ಯ. ಶುದ್ಧ ಸಂತತಿಯೇ ಇಲ್ಲದಿದ್ದರೆ, ಸಾಮಾಜಕ್ಕೆ ಆಗುವ ಹಾನಿ, ಅದು ಅಣುಬಾಂಬಿನಿಂದ ಆಗುವ  ಹಾನಿಗಿಂತ ಹೆಚ್ಚಿನದು ಎನ್ನುವುದರಲ್ಲಿ ಸಂದೇಹವೇ ಇಲ್ಲ.ಮಾನವ ಧರ್ಮದ ಹೆಸರಿನಲ್ಲಿ ವರ್ಣ ವ್ಯವಸ್ಥೆ ಯನ್ನೇ ನಾಶಮಾಡಿ ನಾವೆಲ್ಲಾ ಹಿಂದೂಗಳು, ಎನ್ನುವ ಮಟ್ಟಿಗೆ ಸಮಾನತೆ ಹೇಳುವವರಿಗೆ ಹಿಂದೂಧರ್ಮ ವಾದರೂ ಯಾಕೆ ಬೇಕೋ? ಕ್ರಿಶ್ಚಿಯನ್, ಮುಸಲ್ಮಾನರ ಜೊತೆಗೆ ಸೇರಿ ಮಾನವ ಧರ್ಮವನ್ನು ಸಾರಬೇಕಲ್ಲವೇ? ಅವರೇನು ಮನುಷ್ಯ ರಲ್ಲವೇ? ಮನುಷ್ಯ ಧರ್ಮದ ಹೆಸರಿನಲ್ಲಿ  ನಡೆಸುವ ಸ್ವಾರ್ಥ ಜೀವನಕ್ಕಿಂತ  ಸಮಸ್ತ ಚೇತನಗಳು ಒಂದೇ ಎಂಬ ಭಾವನೆ ಎಷ್ಟು ಉದಾತ್ತ ಅಲ್ಲವೇ !  ಹಾಗಾದ್ರೆ ಸುಂದರವಾದ ಪ್ರಾಣಿಗಳನ್ನು ಸಮಾನವಾಗಿ ಪರಿಗಣಿಸಿ, ಅವುಗಳ ಜೊತೆ ವಿವಾಹ ವಾಗಲಿ, ತರಬೇತುಗೊಂಡ ಪ್ರಾಣಿಗಳ ಜೊತೆ ಸುಖಸಂಸಾರ ನಡೆಸಲಿ, ಆಗ ವಿಶ್ವಕುಟುಂಬದ ಸುಂದರ ವ್ಯವಸ್ಥೆ ಸಾಕಾರವಾಗುವುದು. ಹೀಗೆ ಚಿಂತನೆ ಮಾಡ್ತಾ ಹೋದ್ರೆ ಅರ್ಥವಿಲ್ಲದ ಆದರ್ಶವೇ ಎದ್ದು ತೋರೋದು. ಆದ್ದರಿಂದ ನಿಮ್ಮ ಸ್ವಾರ್ಥ, ದ್ವೇಷ, ಅಸೂಯೆಗಾಗಿ,ಅತ್ಯಲ್ಪ ಸಂಖ್ಯಾತರಾದ,ಸಭ್ಯರಾದ, ವೈದಿಕ ಬ್ರಾಹ್ಮಣ ನಿಂದನೆ ಬಿಟ್ಟು ಅವರ ತ್ಯಾಗಮಯ ಜೀವನಧರ್ಮವನ್ನು ಗೌರವಿಸಿ, ಅವರಂತೂ ಎಂದಿಗೂ ಲೋಕಾಃ ಸಮಸ್ತಾಃ ಸುಖಿನೋ ಭವಂತು ಎನ್ನುವವರು. ನಿಮ್ಮ ಏಕತೆಯನ್ನು ಹರಸುವವರು. ಸಾಧ್ಯವಾದರೆ ಒಂದಾಗಿ ಗೌರವಿಸಿ, ಇಲ್ಲಾ ಬ್ರಾಹ್ಮಣ ನಿಂದನೆಯ ಚಟದಿಂದ ಹೊರಬನ್ನಿ

"ಪುರಿ ಶಂಕರಾಚಾರ್ಯರ ಮಾತು ಅತ್ಯಂತ ಆದರಣೀಯ"

🙏🙏🙏🙏🙏🙏🙏🙏

Popular posts from this blog

ಬ್ರಾಹ್ಮಣ್ಯ ಮತ್ತು ಭಾರತ