Posts

Showing posts from April 23, 2021

శ్రీ ఆంజనేయస్వామి వారి జన్మస్థలం తిరుమలలోని అంజనాద్రి

  [1] ಶ್ರೀ ಆಂಜನೇಯಸ್ವಾಮಿ ವಾರಿ ಜನ್ಮಸ್ಥಲಂ ತಿರುಮಲಲೋನಿ ಅಂಜನಾದ್ರಿ (AJTA)   ಇದು ರಾಮನವಮಿಯ ದಿನ ತಿರುಮಲ ತಿರುಪತಿ ದೇವಸ್ಥಾನ [2] (TTD) ಬಿಡುಗಡೆ ಮಾಡಿದ ಕಿರು ಪುಸ್ತಕ. ಹನುಮಂತ ಹುಟ್ಟಿದ ಸ್ಥಲ ಅಂಜನಾದ್ರಿ ತಿರುಮಲೆಯಲ್ಲಿದೆ ಎಂಬುದಕ್ಕೆ   ಐತಿಹಾಸಿಕ ಪುರಾವೆಗಳನ್ನು ? ಸಂಗ್ರಹಿಸಿ ಮುದ್ರಿಸಿದ್ದು.   AJTA ಪುಟ ೨. ಮೊದಲ ಪ್ಯಾರಾ   ೧. " హనుమంతుడు సర్వదేవతా స్వరూపుడు "   (ಹನುಮಂತನು ಸರ್ವದೇವತಾ ಸ್ವರೂಪ ) ಎಂಬ ಆರಂಭದ ವಾಕ್ಯವೇ ವಿಲಕ್ಷಣವಾಗಿದೆ.   ಹನುಮಂತನು ಸರ್ವದೇವತಾಸ್ವರೂಪನಾಗಿದ್ದರೆ , ಅವನು ರಾಮಸ್ವರೂಪನೂ ಹೌದು.ಅವನು ರಾಮನ ದಾಸ ಎಂದು ಪ್ರಸಿದ್ಧನಾಗಿದ್ದು ಹೇಗೆ ?    ಇಂದಿಗೂ ಕಿಂಪುರುಷ ಖಂಡದಲ್ಲಿ ರಾಮನ ಭಜನೆ ಯಾಕೆ ಮಾಡುತ್ತಿರುವನೋ ? ಎಲ್ಲವೂ ಗೊಂದಲ.   ೨. AJTA ಪುಟ ೨. ಎರಡನೆಯ ಪ್ಯಾರಾ   " ఇలా అభయాంజనేయునిగా ఆనందాంజనేయునిగా ..." ಎಂದು ಆಂಜನೇಯ ಅಭಯ - ಆಂಜನೇಯನಾಗಿ , ಆನಂದಾಂಜನೇಯನಾಗಿ....   ವರ್ಣಿಸಲಾಗಿದೆ. ಇದಕ್ಕೆ ಕೊಟ್ಟ ಕಾರಣಗಳು ೧. ಭಯಗ್ರಸ್ತನಾದ ಸುಗ್ರೀವನಿಗೆ ಅಭಯವಿತ್ತು , ಶ್ರೀರಾಮನ ಜೊತೆ ಮೈತ್ರಿಯನ್ನು ಮಾಡಿಸಿದನಾಗಿ   ಅಭಯಾಂಜನೇಯನೆನಿಸಿದ. ೨. ಮಹಾ ದು:ಖದಲ್ಲಿ ಇದ್ದ ಸೀತಾಮಾತೆಗೆ ಶ್ರೀರಾಮನ ಸಂದೇಶವನ್ನು ತಲುಪಿಸಿ ಆಕೆಯ   ಪ್ರಾಣಗಳನ್ನು ರಕ್ಷಿಸಿ , ಆ ಮಾತೆಯ ಆನಂದಕ್ಕೆ ಕಾರಣನಾದ.   ಆದ್ದರಿಂದ