ಕುಕ್ಕೆ ಕ್ಷೇತ್ರದ ವಿವಾದ
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವಿವಾದ ಅದರ ಹಿಂದಿರುವ ದುರುದ್ದೇಶ. ಕೆಲವು ವ್ಯಕ್ತಿಗಳಿಗೆ ಸಾಮಾನ್ಯಜ್ಞಾನವೂ ಇರೋದಿಲ್ಲ. ಅವರೊಬ್ಬ ಸುಮ್ಮನೆ ಬೊಗಳೆ ಬಿಡುವ ವ್ಯಕ್ತಿಯಾಗಿ ಸಮಾಜದ ನೆಮ್ಮದಿ ಹಾಳುಮಾಡುವರು. ಇಂಥವರ ಮಾತುಗಳು ನ್ಯಾಯಬದ್ಧವಾಗಿರೋದಿಲ್ಲ. ಯಾವುದನ್ನೇ ಮಾತಾಡಲಿ ಸಾಮಾಜಿಕ ವ್ಯವಸ್ಥೆಗೆ ಸಂಬಂಧಿಸಿದ ಇಂತಹ ವಿಷಯಗಳಿಗೆ ನಿರ್ಣಾಯಕವಾಗಿ ಐತಿಹಾಸಿಕ ಆಧಾರಗಳು ಬೇಕು. ಅದಿಲ್ಲದೇ ಊಹಾಪೋಹಗಳ ಗೋಪುರದಿಂದ ಏನೂ ಸಿದ್ಧವಾಗೋದಿಲ್ಲ. ೧. ಮಧ್ವಾಚಾರ್ಯರಿಗಿಂತ ಮೊದಲು ಇದ್ದದ್ದು ಶೈವಾಗಮ ಮಾತ್ರ ಆ ಶೈವಾಗಮದ ರೀತಿಯಲ್ಲೇ ಲೋಕದೆಲ್ಲೆಡೆ ಪೂಜಾಕ್ರಮ ಇತ್ತು, ಎನ್ನುವ ಭ್ರಮೆಯಿಂದ ಮಾಡುವ ವಾದ ೨. ಮಧ್ವಾಚಾರ್ಯರ ನಂತರವೇ ಅದು ಬದಲಾಯಿತು. ಎಂದು ವಾದಿಸುವವರು ಕೆಲವರು ೩. ಮಧ್ವಾಚಾರ್ಯರದ್ದೇ ಒಂದು ಪೂಜಾಕ್ರಮ ಅದನ್ನು ಹುಟ್ಟುಹಾಕಿದವರು ಮಧ್ವಾಚಾರ್ಯರು ಎಂದು ಭಾವಿಸಿದ್ದಾರೆ. ೪. ಮಧ್ವಾಚಾರ್ಯರಿಗಿಂತ ಮೊದಲು ಮಲೆಕುಡಿ ಜನಗಳೇ ಪೂಜೆ ಮಾಡ್ತಿದ್ದ್ರು, ಆಮೇಲೆ ಸ್ಥಾನಿಕರ ಆಡಳಿತಕ್ಕೆ ಬಂತು, ಅನ್ನೋರು ಕೆಲವರು. ಕೆಲವು ವಿಚಾರ ಮಾಡಬೇಕಾದ ವಿಷಯಗಳಿವು. ೧. ಮಧ್ವಾಚಾರ್ಯರಿಗಿಂತ ಮೊದಲೇ ಸಾವಿರಾರು ವರ್ಷಗಳ ಮೊದಲೇ ಪಾಂಚರಾತ್ರ ಆಗಮ ಇತ್ತು ಅನ್ನುವ ಸಾಮಾನ್ಯಜ್ಞಾನವೂ ಇಲ್ಲದವರು ಇಂತಹ ವಿಚಾರದಲ್ಲಿ ತಲೆ ಹಾಕುವುದು ಸರಿಯಲ್ಲ....