ಕುಕ್ಕೆ ಕ್ಷೇತ್ರದ ವಿವಾದ

 ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವಿವಾದ ಅದರ ಹಿಂದಿರುವ ದುರುದ್ದೇಶ.

ಕೆಲವು      ವ್ಯಕ್ತಿಗಳಿಗೆ ಸಾಮಾನ್ಯಜ್ಞಾನವೂ ಇರೋದಿಲ್ಲ. ಅವರೊಬ್ಬ ಸುಮ್ಮನೆ ಬೊಗಳೆ ಬಿಡುವ ವ್ಯಕ್ತಿಯಾಗಿ ಸಮಾಜದ ನೆಮ್ಮದಿ ಹಾಳುಮಾಡುವರು. ಇಂಥವರ ಮಾತುಗಳು ನ್ಯಾಯಬದ್ಧವಾಗಿರೋದಿಲ್ಲ. 

ಯಾವುದನ್ನೇ ಮಾತಾಡಲಿ ಸಾಮಾಜಿಕ ವ್ಯವಸ್ಥೆಗೆ ಸಂಬಂಧಿಸಿದ ಇಂತಹ ವಿಷಯಗಳಿಗೆ  ನಿರ್ಣಾಯಕವಾಗಿ ಐತಿಹಾಸಿಕ ಆಧಾರಗಳು ಬೇಕು.  ಅದಿಲ್ಲದೇ ಊಹಾಪೋಹಗಳ ಗೋಪುರದಿಂದ ಏನೂ ಸಿದ್ಧವಾಗೋದಿಲ್ಲ. 

೧. ಮಧ್ವಾಚಾರ್ಯರಿಗಿಂತ ಮೊದಲು  ಇದ್ದದ್ದು ಶೈವಾಗಮ ಮಾತ್ರ ಆ ಶೈವಾಗಮದ ರೀತಿಯಲ್ಲೇ ಲೋಕದೆಲ್ಲೆಡೆ ಪೂಜಾಕ್ರಮ ಇತ್ತು, ಎನ್ನುವ ಭ್ರಮೆಯಿಂದ  ಮಾಡುವ ವಾದ

೨. ಮಧ್ವಾಚಾರ್ಯರ ನಂತರವೇ ಅದು ಬದಲಾಯಿತು. ಎಂದು ವಾದಿಸುವವರು ಕೆಲವರು 

೩. ಮಧ್ವಾಚಾರ್ಯರದ್ದೇ ಒಂದು ಪೂಜಾಕ್ರಮ ಅದನ್ನು ಹುಟ್ಟುಹಾಕಿದವರು ಮಧ್ವಾಚಾರ್ಯರು ಎಂದು ಭಾವಿಸಿದ್ದಾರೆ. 

೪. ಮಧ್ವಾಚಾರ್ಯರಿಗಿಂತ  ಮೊದಲು ಮಲೆಕುಡಿ ಜನಗಳೇ ಪೂಜೆ ಮಾಡ್ತಿದ್ದ್ರು, ಆಮೇಲೆ ಸ್ಥಾನಿಕರ ಆಡಳಿತಕ್ಕೆ ಬಂತು, ಅನ್ನೋರು ಕೆಲವರು.


ಕೆಲವು ವಿಚಾರ ಮಾಡಬೇಕಾದ ವಿಷಯಗಳಿವು. 

 ೧. ಮಧ್ವಾಚಾರ್ಯರಿಗಿಂತ ಮೊದಲೇ ಸಾವಿರಾರು ವರ್ಷಗಳ ಮೊದಲೇ ಪಾಂಚರಾತ್ರ ಆಗಮ ಇತ್ತು ಅನ್ನುವ ಸಾಮಾನ್ಯಜ್ಞಾನವೂ ಇಲ್ಲದವರು ಇಂತಹ   ವಿಚಾರದಲ್ಲಿ ತಲೆ ಹಾಕುವುದು ಸರಿಯಲ್ಲ. 

೨.  ಪಂಚರಾತ್ರ ಮಾತ್ರವಲ್ಲ ಇನ್ನೂ ಅನೇಕ ಆಗಮಗಳು ಇದ್ದವು ಅವುಗಳ ಪ್ರಕಾರ ಬೇರೆ ಬೇರೆ ದೇವಸ್ಥಾನಗಳಲ್ಲಿ ಬೇರೆ ಬೇರೆ ಆಗಮಗಳ ಪ್ರಕಾರ ಪೂಜೆಯಕ್ರಮ     ದೇಶವ್ಯಾಪಿಯಾಗಿತ್ತು ಅನ್ನೋದು ಐತಿಹಾಸಿಕ ಸತ್ಯ.  

೩. ಮಧ್ವಾಚಾರ್ಯರ ನಂತರವೇ ಪಾಂಚರಾತ್ರ ಆಗಮದ ಪೂಜಾಪದ್ಧತಿ ಬಂದದ್ದಲ್ಲ.  ಮಧ್ವಾಚಾರ್ಯರ ನಂತರ ಪಾಂಚರಾತ್ರ ಪೂಜೆಯ ಪದ್ಧತಿಯಲ್ಲಿ  

     ಆಗುತ್ತಿದ್ದ ಲೋಪದೋಷಗಳ ತಿದ್ದುಪಡಿ ಆಯಿತು. 

೪. ಪಾಂಚರಾತ್ರವನ್ನು ಸಂಪೂರ್ಣ ಪ್ರಮಾಣ ಎಂದು ಅದನ್ನು ಸ್ಥಾಪನೆ ಮಾಡಿದವರು ಮಧ್ವಾಚಾರ್ಯರು. ಇದಕ್ಕೆ ಸಾಕಷ್ಟು ಪ್ರಮಾಣಗಳಿವೆ. 

     ಮಧ್ವಾಚಾರ್ಯರಿಗಿಂತ  ಮೊದಲು ಮಲೆಕುಡಿ ಜನಗಳೇ ಪೂಜೆ ಮಾಡ್ತಿದ್ದ್ರು, ಆಮೇಲೆ ಸ್ಥಾನಿಕರ ಆಡಳಿತಕ್ಕೆ ಬಂತು, ಅನ್ನುವ ನಿಖರ ಮಾಹಿತಿ ಎಲ್ಲಿಂದ ಸಿಕ್ಕಿತು.       ಇದಕ್ಕೆ ಶಿಲಾಶಾಸನಗಳಿವೆಯೋ ? ಇಲ್ಲ ಕೇವಲ ಊಹಾ ಪೋಹಗಳು ಮಾತ್ರವೋ ? 

೫. ಹಾಗೊಮ್ಮೆ  ಇದ್ದರೂ ಆಗಿನ ದೇವಸ್ಥಾನದ ಆಕಾರ ಎಷ್ಟಿತ್ತು ಅನ್ನುವ ಕಲ್ಪನೆಯಾದರೂ ನಮಗಿದೆಯೋ ?  ಅದನ್ನು ಆದಾಯಕ್ಕಾಗಿ ಮಧ್ವಾಚಾರ್ಯರು ಆ    ಜನಗಳಿಂದ ಪಡೆದು ತಮ್ಮ ಪೂಜಾಪದ್ಧತಿಯನ್ನು ಸ್ಥಾಪಿಸಿದರು ಎಂಬುದು ಹಾಸ್ಯಾಸ್ಪದವಷ್ಟೇ ?  

೬. ಆಗಿನ ಮಠ, ಪೀಠ, ಈಗಿನಂತೆ  ವೈಭವದ ತಾಣಗಳಾಗಿದ್ದವು  ಎಂದುಕೊಂಡರೆ, ನಮಗಿಂತ ಪರಮ ಮೂರ್ಖ ಮತ್ತೊಬ್ಬನಿಲ್ಲ. ಒಂದು  ನಲವತ್ತು    ಐವತ್ತು    ವರ್ಷಗಳ ಹಿನ್ನೋಟವೂ ಸಾಕು  ಯಾವ ಹಂತದಲ್ಲಿದ್ದವು ಈ  ಮಠ  ಮಂದಿರಗಳು ಎಂಬುದನ್ನು ಊಹಿಸಲು. 

೭. ಮತ್ತು ಈ ಕುಕ್ಕೆ ಸುಬ್ರಹ್ಮಣ್ಯದೇವಸ್ಥಾನಕ್ಕೆ ಎಷ್ಟು ಪ್ರಾಚೀನ ಪುರಾವೆಗಳಿದ್ದಾವೆ ಎಂಬುದೂ ಮುಖ್ಯ. 

೮. ಈ ದೇವಸ್ಥಾನ ನಮ್ಮದು ಅವರದ್ದಲ್ಲ ಅನ್ನೋ ವಾದ ಯಾವುದೇ ಪಾಳುಬಿದ್ದ ದೇವಸ್ಥಾನಗಳ ಕುರಿತು ಯಾಕೆ ನಡೆಯೋದಿಲ್ಲ. ಬೇಕಾದಷ್ಟು ಶೈವ, ವೈಷ್ಣವ ದೇಗುಲಗಳು ಅರ್ಚಕರೂ ಇಲ್ಲದೇ ಪಾಳುಬಿದ್ದಿವೆ. ಸರಕಾರವನ್ನು ಮೊದಲು ಮಾಡಿ ಯಾವುದೇ ಶ್ರೀಮಂತ,  ಜ್ಯೋತಿಷಿ,   ರಾಜಕಾರಣಿ, ಅಥವಾ ಒಂದು ಸಮಾಜದ ಪ್ರಭಾವಶಾಲಿಯಾದ,  ಮುಖಂಡ, ಇವರ ಮನಸ್ಸಿಗೆ ಅವುಗಳ ಪೂಜಾಕ್ರಮದ ಬಗ್ಗೆ,  ಜೀರ್ಣೋದ್ಧಾರದ ಬಗ್ಗೆ  ಆಲೋಚನೆಯೇ ಬರೋದಿಲ್ಲ. ಆದರೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ಎಲ್ಲಿಲ್ಲದ ಕಾಳಜಿ. ಅದು ಆಗಮಶಾಸ್ತ್ರದ ನಿಷ್ಠೆಯಲ್ಲ, ಅಲ್ಲಿರುವ ಸಂಪತ್ತಿನ ಮೇಲಿರುವ ನಿಷ್ಠೆ. ಬರುವ ಆದಾಯದ   ಮೇಲಿನ ನಿಷ್ಠೆ. 

೯. ಈ ಢೋಂಗಿ ನಿಷ್ಠೆಯ  ಶ್ರೀಮಂತ,  ಜ್ಯೋತಿಷಿ,  ಅಧಿಕಾರವನ್ನು ದುರುಪಯೋಗ ಮಾಡುವ ರಾಜಕಾರಣಿ, ಅಥವಾ ಒಂದು ಸಮಾಜದ ಪ್ರಭಾವಶಾಲಿಯಾದ,  ಮೊಂಡುತನದ ಮುಖಂಡ ಹಿಂದಿನಿಂದ ಪ್ರಚೋದಿಸಿದ, ಅನ್ನುವ ಮಾತ್ರಕ್ಕೆ ಒಂದು ಸಂಪ್ರದಾಯವನ್ನು ತುಳಿಯುವುದು, ಸಮಾಜದ ನೀತಿಸಂಹಿತೆಗೆ  ಮಾಡುವ ಅಪಚಾರ. 

೧೦. ನಾವು ಇತ್ತೀಚಿನ ಸಾಧಕರದ ರಾಮಕೃಷ್ಣ ಪರಮಹಂಸರನ್ನು, ವಿವೇಕಾನಂದರನ್ನು,  ಅವರ ಅನೇಕ ಸ್ಮಾರಕಗಳ ಸಂರಕ್ಷಣೆಯ ಮೂಲಕ ಗೌರವಿಸುತ್ತೇವೆ.  ಅಷ್ಟೇಕೆ ರಾಜಕಾರಣವನ್ನು ಮಾಡಿದ ಅನೇಕ ರಾಜಕೀಯ ವ್ಯಕ್ತಿಗಳಿಗೆ ಸ್ಮಾರಕಗಳ ನಿರ್ಮಾಣಮಾಡಲು ನಮ್ಮ ತನು, ಮನ, ಧನ ಸಹಕಾರ ನೀಡುತ್ತೇವೆ.       

     ಕನ್ನಡನಾಡಿನಲ್ಲಿ ಜನಿಸಿದ ಪ್ರಸಿದ್ಧ ದಾರ್ಶನಿಕರು ಮಧ್ವಾಚಾರ್ಯರು. ಅವರ ಪ್ರತಿನಿತ್ಯ ಜೀವನದ ಸಾಧನೆಯ ಸ್ಥಾನ  ಈ ಕುಕ್ಕೆ ಕ್ಷೇತ್ರ. ಅವರಿಂದ ಆಶ್ರಮದೀಕ್ಷೆಪಡೆದ ವಿಷ್ಣುತೀರ್ಥರು ಮಹಾ ತಪಸ್ವಿಗಳು ಯೋಗಸಾಧಕರು. ಅವರ ತಪಸ್ಸಿನಿಂದ ಪವಿತ್ರವಾದದ್ದು ಕುಮಾರಪರ್ವತ. ಇಂತಹ ಕುಕ್ಕೆ   ಕ್ಷೇತ್ರವನ್ನು ಆ ಇಬ್ಬರು ಮಹಾನುಭಾವರ ಕಾರ್ಯಕ್ಷೇತ್ರವಾಗಿದ್ದರಿಂದ ಅದನ್ನು ಅವರ ಸ್ಮಾರಕವಾಗಿ ಸಂರಕ್ಷಿಸಿಕೊಂಡು ಹೋಗುವುದು ಸರಕಾರದ, ಸಮಾಜದ ಕರ್ತವ್ಯ.     

೧೧.    ನಿಮಗೆ ಇಷ್ಟವಾಗದಿದ್ದಲ್ಲಿ ನಿಮ್ಮ ಶ್ರದ್ಧಾಕೇಂದ್ರವನ್ನು ಬದಲಾಯಿಸಿಕೊಳ್ಳಿ,  ಆದರೆ ಒಬ್ಬ ಮಹಾನ್ ದಾರ್ಶನಿಕರ ಸಾಧನೆಯ ಕ್ಷೇತ್ರವನ್ನೇ ಅಪಹರಿಸುವ ಕುಕೃತ್ಯಕ್ಕೆ  ಕೈ ಹಾಕಬೇಡಿ. ಹಾಗೆ ಮಾಡಿದಲ್ಲಿ ವಿದೇಶಿಗಳ ಆಕ್ರಮಣಕ್ಕೂ ನಿಮಗೂ ಏನು ವ್ಯತ್ಯಾಸ ?  ಎಲ್ಲರೊಂದಿಗೆ ಬಾಳುವ ನಮ್ಮ ಸಹಿಷ್ಣು ಭಾವವೇ  ತಪ್ಪಾಯಿತೇ ?  ಆಶ್ರಯವಿತ್ತರೆ,  ಸಂಖ್ಯೆಯಬಲವನ್ನು ಹೆಚ್ಚಿಸಿಕೊಂಡು, ಅಪಹರಣವನ್ನು  ಮಾಡುವುದು ಸರಿಯೇ? 

೧೧.    ಈಗ ಉಪಲಬ್ಧವಾದ ಪುರಾವೆಗಳು ಏನನ್ನು ತಿಳಿಸುತ್ತವೆಯೋ ಅದನ್ನು ಪಾಲಿಸುವುದು, ಅದಕ್ಕೆ ಚ್ಯುತಿಬರದಂತೆ  ನೋಡಿಕೊಳ್ಳುವುದು ಸಾಮಾಜಿಕ ಜವಾಬ್ದಾರಿ.

Popular posts from this blog

ಬ್ರಾಹ್ಮಣ್ಯ ಮತ್ತು ಭಾರತ